04:21 PM
ಶೃಂಗೇರಿಯಲ್ಲಿ ಜಿದ್ದಾ ಜಿದ್ದಿನ ಸ್ಪರ್ಧೆಯಲ್ಲಿ 153 ಮತಗಳ ಅಂತರರದಿಂದ ಡಿ.ಎನ್.ಜೀವರಾಜ್ ಅವರ ವಿರುದ್ಧ ಕಾಂಗ್ರೆಸ್ ನ ಟಿ.ಡಿ.ರಾಜೇಗೌಡ ಗೆಲುವು ಸಾಧಿಸಿದ್ದಾರೆ.
04:09 PM
ವಿಜಯಪುರ; 8 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಲಾ ಒಂದು ಕ್ಷೇತ್ರದಲ್ಲಿ ಗೆಲುವು
04:08 PM
ಶಿರಹಟ್ಟಿ ವಿಧಾನಸಭಾ ಕ್ಷೇತ್ರ;27,963 ಮತಗಳ ಅಂತರದಲ್ಲಿ ಚಂದ್ರು ಲಮಾಣಿ ಬಿಜೆಪಿ ಅಭ್ಯರ್ಥಿ ಗೆಲುವು
04:08 PM
ರೋಣ ವಿಧಾನಸಭಾ ಕ್ಷೇತ್ರ: 24,690 ಮತಗಳ ಅಂತರದಲ್ಲಿ ಜಿ.ಎಸ್.ಪಾಟೀಲ ಗೆಲುವು
04:07 PM
ನರಗುಂದ ವಿಧಾನ ಸಭಾ ಕ್ಷೇತ್ರ;1791 ಮತಗಳ ಅಂತರದಲ್ಲಿ ಸಿ.ಸಿ.ಪಾಟೀಲ ಗೆಲುವು
04:07 PM
ಗದಗ ವಿಧಾನಸಭಾ ಕ್ಷೇತ್ರ ; 15,130 ಗಳ ಅಂತರದಲ್ಲಿ ಹೆಚ್.ಕೆ.ಪಾಟೀಲ ಗೆಲುವು
04:05 PM
ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಹ್ಯಾಟ್ರಿಕ್ ದಾಖಲೆ ಬರೆದ ಪ್ರಸಾದ ಅಬ್ಬಯ್ಯ.
04:03 PM
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ : ಜಗದೀಶ್ ಶೆಟ್ಟರ್‌ಗೆ ಹೀನಾಯ ಸೋಲು, ಮಹೇಶ್ ಟೆಂಗಿನಕಾಯಿ ಗೆಲುವಿನ ನಗೆ
03:11 PM
ನಾನು ಒಬ್ಬಂಟಿಯಾಗಿ ಹೋಗಬೇಕಾಗಿದೆ. ಅಧಿಕಾರ ಹಿಡಿದಿರುವ ಕಾಂಗ್ರೆಸ್ ಗೆ ಬೆಂಬಲ ಸೂಚಿಸುತ್ತೇನೆ ಎಂದ ಗಂಗಾವತಿಯಲ್ಲಿ ಗೆಲುವು ಸಾಧಿಸಿರುವ ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ
03:10 PM
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗೆಲುವಿನ ಅಂತರದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕನಕಪುರದಲ್ಲಿ 1. 25 ಲಕ್ಷಕ್ಕೂ ಹೆಚ್ಚು ಮತಗಳ ಅಂತರ.
02:44 PM
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಚಿಕ್ಕಮಗಳೂರಿನಲ್ಲಿ ಆಘಾತಕಾರಿ ಸೋಲು. ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಅವರಿಗೆ ಭರ್ಜರಿ ಜಯ.
02:39 PM
ಸಚಿವ ಬಿ.ಸಿ. ನಾಗೇಶ್ ಅವರಿಗೆ ತಿಪಟೂರಿನಲ್ಲಿ ಸೋಲು, ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿಗೆ ಭರ್ಜರಿ ಜಯ
02:37 PM
ಮಹಾದೇವ ಪುರ ಮೀಸಲು ಕ್ಷೇತ್ರದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಪತ್ನಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅವರಿಗೆ ಜಯ. ಕಾಂಗ್ರೆಸ್ ನ ಹೆಚ್. ನಾಗೇಶ್ ಅವರಿಗೆ ಸೋಲು
02:21 PM
ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ 160 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲುವು.
02:19 PM
ವಿ. ಸೋಮಣ್ಣ ಪ್ರತಿನಿಧಿಸುತ್ತಿದ್ದ ಗೋವಿಂದರಾಜ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಗೆಲುವು.
02:17 PM
ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರಿಗೆ ಸೋಲು
01:48 PM
ಪುತ್ತೂರಿನ ಜಿದ್ದಾಜಿದ್ದಿ ಹೋರಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಗೆ ಜಯ. ಪಕ್ಷೇತರ ಅರುಣ್ ಕುಮಾರ್ ಪುತ್ತಿಲ ಅವರಿಗೆ ಸೋಲು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಮೂರನೇ ಸ್ಥಾನ
01:44 PM
ಗಾಂಧಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಅವರಿಗೆ ಪ್ರಯಾಸದ ಗೆಲುವು.
01:32 PM
ಪುತ್ತೂರು ವಿಧಾನಸಭಾ ಕ್ಷೇತ್ರ ದ 15ನೇ ಸುತ್ತಿನ ಮತ ಎಣಿಕೆಯಲ್ಲಿ 2673 ಮತಗಳಿಂದ ಅಶೋಕ್ ರೈ ಮುನ್ನಡೆ
01:29 PM
ಗೋಕಾಕ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ ಜಾರಕಿಹೊಳಿಗೆ ಗೆಲುವು. ಚನ್ನಪಟ್ಟಣದಲ್ಲಿ ಎಚ್‌ ಡಿ ಕುಮಾರಸ್ವಾಮಿ ಮುನ್ನಡೆ.
01:24 PM
ಸುರಪುರ ಕ್ಷೇತ್ರದಲ್ಲಿ ಬಿಜೆಪಿಯ ರಾಜುಗೌಡಗೆ ಸೋಲು. ಹುನಗುಂದದಲ್ಲಿ ಕಾಂಗ್ರೆಸ್‌ ನ ಕಾಶಪ್ಪನವರ್‌ ಗೆ ಗೆಲುವು. ಕುಡಚಿಯಲ್ಲಿ ಬಿಜೆಪಿಯ ಪಿ.ರಾಜೀವ್‌ ಸೋಲು.
01:21 PM
ಕೆಆರ್‌ ಪೇಟೆಯಲ್ಲಿ ಬಿಜೆಪಿಯ ನಾರಾಯಣ ಗೌಡಗೆ ಹೀನಾಯ ಸೋಲು. ಜೆಡಿಎಸ್‌ ನ ಎಚ್‌ ಟಿ ಮಂಜುಗೆ ಜಯ.
01:20 PM
ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ನ ಎಚ್‌ ವೈ ಮೇಟಿಗೆ ಗೆಲುವು. ಮೇಲುಕೋಟೆಯಲ್ಲಿ ದರ್ಶನ್‌ ಪುಟ್ಟಣ್ಣಯ್ಯಗೆ ಜಯ.
01:19 PM
ತೇರದಾಳದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದುಗೆ ಗೆಲುವು. ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಎಸ್‌ ಆರ್‌ ಶ್ರೀನಿವಾಸ್‌ ಗೆ ಜಯ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಧೀರಜ್‌ ಗೆ ಜಯ.
01:18 PM
ಶಿರಾದಲ್ಲಿ ಕಾಂಗ್ರೆಸ್‌ ನ ಟಿಬಿ ಜಯಚಂದ್ರಗೆ ಗೆಲುವು. ಬಿಜೆಪಿ ಅಭ್ಯರ್ಥಿ ರಾಮಚಂದ್ರ ಗೌಡಗೆ ಸೋಲು. ವರುಣಾದಲ್ಲಿ ಬಿಜೆಪಿಯ ವಿ.ಸೋಮಣ್ಣಗೆ ಹಿನ್ನಡೆ.
01:12 PM
ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ನಯನಾ ಮೋಟಮ್ಮಗೆ ಜಯ. ಹರಪನಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಲತಾಗೆ ಗೆಲುವು.ಬಿಜೆಪಿಯ ಕರುಣಾಕರ ರೆಡ್ಡಿಗೆ ಸೋಲು.
01:09 PM
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಮಾಧುಸ್ವಾಮಿಗೆ ಸೋಲು. ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಮಾಂಕಾಳ ವೈದ್ಯಗೆ ಗೆಲುವು.
01:05 PM
ಕೊರಟಗೆರೆಯಲ್ಲಿ ಕಾಂಗ್ರೆಸ್‌ ನ ಜಿ.ಪರಮೇಶ್ವರ್‌ ಗೆ 19,000 ಮತಗಳ ಅಂತರದಲ್ಲಿ ಗೆಲುವು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಜಗದೀಶ್‌ ಶೆಟ್ಟರ್‌ ಗೆ ಸೋಲು.
01:00 PM
ಬೈಂದೂರು 10ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ 6944ಮತಗಳ ಮುನ್ನಡೆ
12:54 PM
ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಪ್ರಿಯಾಂಕ ಖರ್ಗೆಗೆ ಜಯ. ಬೀಳಗಿಯಲ್ಲಿ ಬಿಜೆಪಿಯ ಮುರುಗೇಶ್‌ ನಿರಾಣಿಗೆ ಸೋಲು.
12:53 PM
ಬೀದರ್‌ ನ ಭಾಲ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಈಶ್ವರ್‌ ಖಂಡ್ರೆಗೆ ಜಯ. ಮಾಗಡಿಯಲ್ಲಿ ಕಾಂಗ್ರೆಸ್‌ ನ ಎಚ್.ಸಿ.ಬಾಲಕೃಷ್ಣಗೆ ಗೆಲುವು.
12:50 PM
ಶ್ರೀನಿವಾಸ್‌ ಪುರದಲ್ಲಿ ಮಾಜಿ ಸ್ಪೀಕರ್‌, ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಕುಮಾರ್‌ ಗೆ ಸೋಲು. ಬಬಲೇಶ್ವರದಲ್ಲಿ ಕಾಂಗ್ರೆಸ್‌ ನ ಎಂಬಿ ಪಾಟೀಲ್‌ ಮುನ್ನಡೆ.
12:47 PM
ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ರಾಮಲಿಂಗಾರೆಡ್ಡಿಗೆ ಜಯ. ಬಿಜೆಪಿಯ ಶ್ರೀಧರ ರೆಡ್ಡಿಗೆ ಸೋಲು.
12:46 PM
ಅರಸಿಕೆರೆ ಕಾಂಗ್ರೆಸ್‌ ನ ಶಿವಲಿಂಗೇಗೌಡಗೆ ಜಯ. ಖಾನಾಪುರದಲ್ಲಿ ಅಂಜಲಿ ನಿಂಬಾಳ್ಕರ್‌ ಗೆ ಸೋಲು. ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಗೆ ಜಯ.
12:45 PM
ಮುಧೋಳದಲ್ಲಿ ಕಾಂಗ್ರೆಸ್‌ ನ ಆರ್‌ ಬಿ ತಿಮ್ಮಾಪುರ್‌ ಗೆ ಗೆಲುವು. ಬಿಜೆಪಿಯ ಗೋವಿಂದ ಕಾರಜೋಳಗೆ ಹೀನಾಯ ಸೋಲು.
12:43 PM
ಬಾದಾಮಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಚಿಮ್ಮನಕಟ್ಟಿಗೆ ಗೆಲುವು. ಕಾರವಾರದಲ್ಲಿ ಕಾಂಗ್ರೆಸ್‌ ನ ಸತೀಶ್‌ ಸೈಲ್‌ ಜಯಭೇರಿ. ತೀರ್ಥಹಳ್ಳಿಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರಗೆ ಗೆಲುವು.
12:41 PM
ರಾಜಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಎನ್.ಸುರೇಶ್‌ ಕುಮಾರ್‌ ಗೆ ಗೆಲುವು. ಮಡಿಕೇರಿಯಲ್ಲಿ ಕಾಂಗ್ರೆಸ್‌ ನ ಮಂಥರ್‌ ಗೌಡಗೆ ಜಯ.
12:40 PM
ಶಿರಸಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕಗೆ ಗೆಲುವು. ಹೊಳೆನರಸೀಪುರದಲ್ಲಿ ಎಚ್.ಡಿ.ರೇವಣ್ಣಗೆ ಜಯ. ಕಾಂಗ್ರೆಸ್‌ ನ ಶ್ರೇಯಸ್‌ ಪಟೇಲ್‌ ಗೆ ಸೋಲು.
12:39 PM
ಬೈಂದೂರು ಕ್ಷೇತ್ರದಲ್ಲಿ 8 ಸುತ್ತಿನ ಬಳಿಕ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳಿ 4370 ಮತಗಳ ಮುನ್ನಡೆ
12:34 PM
ಶಾಂತಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಎನ್‌ ಎ ಹ್ಯಾರಿಸ್‌ ಗೆ ಗೆಲುವು. ಬಿಜೆಪಿ ಅಭ್ಯರ್ಥಿ ಶಿವಕುಮಾರ್‌ ಗೆ ಸೋಲು.
12:33 PM
ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರ್‌ ಸ್ವಾಮಿಗೆ ಸೋಲು. ಕಾಂಗ್ರೆಸ್‌ ನ ಇಕ್ಬಾಲ್‌ ಹುಸೇನ್‌ ಗೆ ಜಯ.
12:32 PM
ಹಳಿಯಾಳದಲ್ಲಿ ಕಾಂಗ್ರೆಸ್‌ ನ ಆರ್‌ ವಿ ದೇಶಪಾಂಡೆಗೆ ಜಯ. ಬಿಜೆಪಿಯ ಸುನಿಲ್‌ ಹೆಗಡೆಗೆ ಸೋಲು. ಟಿ.ನರಸೀಪುರದಲ್ಲಿ ಕಾಂಗ್ರೆಸ್‌ ನ ಡಾ.ಮಹದೇವಪ್ಪಗೆ ಗೆಲುವು.
12:30 PM
ಕೋಲಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ ಗೆ ಗೆಲುವು. ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್‌ ಗೆ ಸೋಲು.
12:26 PM
ವಿಜಯನಗರದಲ್ಲಿ ಆನಂದ್‌ ಸಿಂಗ್‌ ಪುತ್ರ, ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್‌ ಗೆ ಸೋಲು. ಶಿರಸಿಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸೋಲು.
12:24 PM
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಗೆ ಸೋಲು. ಕಾಂಗ್ರೆಸ್‌ ನ ಪ್ರದೀಪ್‌ ಈಶ್ವರ್‌ ಗೆ ಗೆಲುವು.
12:19 PM
ಕನಕಪುರದಲ್ಲಿ ಡಿಕೆ ಶಿವಕುಮಾರ್‌ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು. ಬಿಜೆಪಿ ಅಭ್ಯರ್ಥಿ ಆರ್‌ ಅಶೋಕ್‌ ಗೆ ತೀವ್ರ ಮುಖಭಂಗ.
12:18 PM
ಪುತ್ತೂರು ವಿಧಾನಸಭಾ ಕ್ಷೇತ್ರ ದ 11ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 119 ಮತಗಳ ಮುನ್ನಡೆ
12:13 PM
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ್ ಗೆಲುವು
12:13 PM
ತುಮಕೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಬಿ.ಸುರೇಶ್ ಗೌಡ ಬಾರಿ ಮುನ್ನಡೆ
12:09 PM
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಗೆ ಜಯ
12:08 PM
ಹೊನ್ನಾಳಿಯಲ್ಲಿ ಬಿಜೆಪಿಯ ರೇಣುಕಾಚಾರ್ಯಗೆ ಸೋಲು. ಕಾಂಗ್ರೆಸ್‌ ಅಭ್ಯರ್ಥಿ ಶಾಂತನಗೌಡಗೆ ಗೆಲುವು.
12:07 PM
ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ನ ಸ್ವರೂಪ್‌ ಪ್ರಕಾಶ್‌ ಗೆಲುವು ಸಾಧಿಸಿದ್ದು, ಬಿಜೆಪಿಯ ಪ್ರೀತಂ ಗೌಡ ಸೋಲನ್ನನುಭವಿಸಿದ್ದಾರೆ.
12:04 PM
ಪದ್ಮನಾಭನಗರದಲ್ಲಿ ಬಿಜೆಪಿಯ ಆರ್ ಅಶೋಕ್‌ ಗೆ ಸತತ 7ನೇ ಬಾರಿ ಗೆಲುವು. ವಿರಾಜಪೇಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪೊನ್ನಣ್ಣಗೆ ಜಯ. ಬಿಜೆಪಿ ಅಭ್ಯರ್ಥಿ ಬೋಪಯ್ಯಗೆ ಸೋಲು.
12:03 PM
ಕಾರ್ಕಳ ಕ್ಷೇತ್ರದ 12ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ 2350 ಮತಗಳ ಮುನ್ನಡೆ
12:02 PM
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿಗೆ ಗೆಲುವು. ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿಯ ಸುನಿಲ್‌ ಕುಮಾರ್‌ ಗೆ ಹಿನ್ನಡೆ.
11:59 AM
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲುಗೆ 20,000 ಮತಗಳ ಅಂತರದಲ್ಲಿ ಸೋಲು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ಯಾಮನೂರು ಶಿವಶಂಕರಪ್ಪಗೆ ಗೆಲುವು.
11:57 AM
ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಮುನಿರತ್ನಗೆ ಹಿನ್ನಡೆ, ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾಗೆ ಮುನ್ನಡೆ.
11:56 AM
ಕೊಡಗಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುನ್ನಡೆ, ಬಿಜೆಪಿಗೆ ಹಿನ್ನಡೆ. ನಾಗಮಂಗಲದಲ್ಲಿ ಚಲುವರಾಯಸ್ವಾಮಿಗೆ ಗೆಲುವು.
11:55 AM
ಬೈಂದೂರು ಕ್ಷೇತ್ರದಲ್ಲಿ 7 ಸುತ್ತಿನ ಬಳಿಕ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳಿ 2232 ಮತಗಳ ಮುನ್ನಡೆ
11:54 AM
ಉಳ್ಳಾಲದಲ್ಲಿ ಕಾಂಗ್ರೆಸ್‌ ನ ಯುಟಿ ಖಾದರ್‌ ಗೆ 18,000 ಮತಗಳ ಅಂತರದಿಂದ ಗೆಲುವು, ಬಿಜೆಪಿಯ ಸತೀಶ್‌ ಕುಂಪಲಗೆ ಸೋಲು.